ಕಲ್ಪನೆಯ ಕನಸು ಇದು.. ಕಣ್ಒಂದೇ ಕಾಣುವುದು..
ಹಿಂತಿರುಗಿ ನೋಡಿದರೆ ಕೊಳೆತೆವೆಸ್ಟೋ ಅಲ್ಲಿ..
ಮುಂತಿರುಗಿ ನೋಡಿರೆ ಉಳಿದವೆಸ್ಟೋ ಇಲ್ಲಿ..
ನಮ್ಮ ನೋಟಕ್ಕೆ ಪರದೆ ಎಳೆದ ನಾವು..
ದೃಷ್ಟಿ ಇದ್ದರೆನು.. ಇಲ್ಲದಿದ್ದರೆನು.. ಕತ್ತಲೆಂದರೆನು.. ಬೆಳಕುಯೆಂದರೆನು..
ಮನಸ ಮನಸ ಮದ್ಯೆ ಕನಸು ತಂದವರಾರು..
ಕನಸು ನನಸಾಗಿಸಿ ಮನಸು ಗೆದ್ದವರಾರು..
ಯಾರದೋ ಕನಸನ್ನು ನಮ್ಮದೆನ್ನಿಸಿ… ಆ ಕನಸ ನನಸಾಗಲು ಕಾರ್ಯ ಓಪ್ಪಿಸಿ…
ಕಾಯಕವೇ ದೇವರೆಂದು ನಂಬಿಸುವ ಇವರು..
ಆಸ್ತಿಕರೂ ಇವರು.. ನಾಸ್ತಿಕರೂ ಇವರು.. ಕರ್ತೃಗಳೂ ಇವರು.. ಕ್ರೂರಿಗಳೂ ಇವರು…
ವಿದ್ಯೆ ಬುದ್ದಿಯ ಮದ್ಯ ದುಡ್ಡು ತಂದವರಾರು..
ಕಲೆಗೆ ಬೆಲೆ ಕಟ್ಟಲು ತಲೆಯ ಹಿಡಿದವರಾರು..
ಯಾರದೋ ಅಸ್ತಿಯ ಮೇಲೆ ಹುಟ್ಟಿ ಬಂದೆವು..
ಅವರ ಕನಸನ್ನೆ ಮತ್ತೆ ಹೊತ್ತು ತಂದೆವು..
ಎಲ್ಲಾ ಕನಸಿನ ಮೂಲ ಅಹಮ್ ಎಂದಮೇಲೆ..
ಹಾವು ಇಲ್ಲಿ ಯಾರು.. ಇಲಿ ಇಲ್ಲಿ ಯಾರು.. ಹುಲಿ ಇಲ್ಲಿ ಯಾರು.. ಹಸು ಇಲ್ಲಿ ಯಾರು..