ಆ ಮೋಡ ಹೆಣ್ಣಾಗಿ ಧರೆಗಿಳಿದಿದೆ
ಆ ಶಶಿಯು ನಿನ್ನಕಂಡು ಬೆರಗಾಗಿದೆ
ಆ ಚುಕ್ಕಿ ನಿನ್ನ ನೋಡುತ, ಕಣ್ಣುಹೊಡೆದು ಕುಣಿದಾಡಿದೆ
ತಂಗಾಳಿ ಕೂಡ ತುಸಿ ನಿಂತಿದೆ;
ಅಂಥ ಚಂದ ಈ ನಿನ್ನ ಅಂದ
ಎಂಥ ಸೊಗಸು ಈ ನಿನ್ನ ಸೊಬಗು
ನಿನ್ನ ನಗುವನು ಕಾಯುತ, ಧರಣಿ ಕೂಡ ತುಸು ನಿಂತಿದೆ
ಒಮ್ಮೆ ನೀನು ನಗಬಾರದೇ
ಅವಳ ಒಲೆಯ, ಕಾಲ ಗೆಜ್ಜೆಯ, ಬಳೆಯ ಘಲ್ಗೆ ಎದೆಯು ಗುಲ್ಲೂ
ಇವಳ ಕಣ್ಣುಗಳ ಕಂಡ ಮೀನುಗಳು, ನೀರಬಿಟ್ಟು ಆಚೆ ಬರದು
ಇವಳ ನೋಡಿ ಬ್ರಹ್ಮನು ಕೂಡ ಹಾಗೆ ಸುಮ್ಮನೆ ನಿಂತನು
ಇಂದ್ರ ಕೂಡ ಚಂದ್ರನ ಕರೆದು ಒಂದು ಗುಟ್ಟನು ಹೇಳಿದನು
ಇಂಥ ಚಲುವ ಎಂದು ಕಂಡಿಲ್ಲ
ಅಂದಕ್ಕೆ ಅಂದವೇ ಶರಣಾದಂತೆ
ನಿನ್ನ ಚಲುವಿಗೆ ಇನ್ನು ಶರಣಾದೆ ನಾ
ಅವಳ ವೈಯಾರ ಅವಳ ಬಿನ್ನಾಣ, ನಡಿಗೆ ಕಂಡು ನಾಚಿತು ನವಿಲು
ಅವಳ ಚಂದವ ಮೀರಿದ ಚೆಲುವು, ಅದುವೇ ನೋಡು ಈ ಸುಂದರಿಯ ನೆರಳು
ಮಮತೆ ಪ್ರೀತಿಯ ತೂಗುವ ಮನವು, ಇವಳ ಕಾಂತಿಯ ಕಾರಣವು
ಸರಳತೆ, ಸಮರಸ, ಸಹಬಾಳ್ವೆ, ತಾಳ್ಮೆ, ಇವಳ ಬದುಕಿನ ಅಸ್ತಿತ್ವವು
ನನ್ನ ಬಾಳ ಬೆಳದಿಂಗಳು ಇವಳು
ನನಸಾಗದ ಕನಸಾಗಿ ನೆನಪಾದಳು
ನಗುವಾಗಿ ತುಟಿಯಲ್ಲಿ ಮರೆಯಾದಳು
ನನ್ನ ರಾಧೇ..! Explication
This is a fictional story that I created just as a background for this poem.
ಕೃಷ್ಣ ರಾಧೆ ಒಂದಾಗದಿದ್ದಾಗ, ವಿರಹದಲ್ಲಿದ ರಾಧೆ ಎಲ್ಲಾ ಗಂಡಸರಿಗೂ ಶಾಪ ಕೊಟ್ಟಳಂತೆ, ಇನ್ನುಮುಂದೆ ಈ ಪ್ರೇಮದ ವಿರಹ ಹೆಣ್ಣಿಗಿಂತ ಗಂಡು ಜಾಸ್ತಿ ಅನುಭವಿಸಲಿ. ಅವತ್ತಿನಿಂದ, ಇವತ್ತಿನವರೆಗೂ ಪ್ರೇಮದಲ್ಲಿ ವಿರಹಗೀತೆ ಹುಡುಗರದ್ದೇ ಹೆಚ್ಚು. ಈ ಒಂದು ಆಲೋಚನೆಯಲ್ಲಿ ಹುಟ್ಟಿದ ಪದಗಳು ಇವು “ತಿರುವಾದ ಪಾತ್ರಗಳ್ಲಲಿ”.
ಹೆಣ್ಣನ್ನು ಹೊಗಳಿ ಬರದಿರುವ ಬರಹಗಳು ಸಾಕಷ್ಟಿವೆ ಅದರಲ್ಲಿ ಇದು ಒಂದು ಅಂಥ ಓದದೇ ಇದರಲ್ಲಿರೋ ಒಂದು ಪ್ರೇಮವಿರಹ ಅರಿಯುವ ಪ್ರಯತ್ನ ಪಡಿ, ಚೆನ್ನಾಗಿರುತ್ತೆ!
English Translation of Kannada poem Nanna Radhe ನನ್ನ ರಾಧೇ..!
The cloud descended to the earth as a woman,
The moon, astonished by your beauty, stood in awe.
The star, gazing at you, blinked and danced with delight,
Even the gentle breeze paused in its tracks.
Such is your grace, your captivating charm,
The earth, too, halts in anticipation of your smile.
Won’t you smile just once?
Her affection, the anklet’s rhythm, the bangles’ chime—
All resonate in harmony.
Fish, captivated by her eyes, refused to leave the water.
Even Brahma paused at her sight,
And Indra whispered a secret to the moon,
Saying, “Never have I seen such beauty.”
And thus, surrendering to her radiance,
I, too, surrender to your allure.
Her elegance, her poise, her walk—
Even the peacock was humbled.
Her beauty surpasses all;
Even her shadow is a marvel.
A heart swaying with love and compassion,
Her brilliance is the reason behind it.
Simplicity, harmony, coexistence, patience—
These define her existence.
She is the moonlight of my life,
she is a dream that never came true,
A memory that lingers,
Hiden as a smile on my lips