ನಿನಗಾಗಿಯೇ ಈ ಜೀವವು ಇನ್ನು ಉಳಿದಿದೆ…
ನಿನಗಾಗಿಯೇ ಈ ಹೃದಯವು ಇನ್ನು ಮಿಡಿದಿದೆ…
ಮನದಲಿ ಬೆಳಗಿದ ಪ್ರೀತಿಯ ಜ್ಯೋತಿಯು ಬೆಳಗಿದೆ ನಿನಗಾಗಿ…
ನೆನಪು ಹೊತ್ತು ತಂದಿದೆ ಖುಷಿಯ ದಿನಗಳಾ…
ಅದರಲಿ ತುಂಬಿದೆ ಕಳೆದಾ ಕ್ಷಣಗಳಾ…
ಹೃದಯದಿ ಬೆರೆತೆವು ಬದುಕಲಿ ಸೇರದೆ…
ಬಯಸಿದ್ದು ಪಡೆದದ್ದು ಬೇರೆನೆಯಿದೆ…
ಮನದಲಿ ಬೆಳಗಿದ ಪ್ರೀತಿಯ ಜ್ಯೋತಿಯು ಬೆಳಗಿದೆ ನಿನಗಾಗಿ…
ಶಾಪವು ನಾ ಬದುಕಲು ನೀನಿರದಾ ಬಾಳಲಿ…
ಹನಿಯೊಂದು ಉಳಿದಿದೆ ಕಣ್ಣ ಅಂಚಲಿ…
ಒಡೆದಿರೋ ಕನಸನ್ನು ಹೆಣೆವ ಬರದಲಿ…
ನೋವೆಂದು ಬಣ್ಣವನು ಹರಿಸುವುದು ಬಾಳಲಿ…
ಮನದಲಿ ಬೆಳಗಿದ ಪ್ರೀತಿಯ ಜ್ಯೋತಿಯು ಬೆಳಗಿದೆ ನಿನಗಾಗಿ…