ನಿನ್ನ ನೆನಪಲ್ಲೇ

ನೀನೇಕೆ ಎದುರಾದೆ
ಮನಸೋತೆ ನಾನೇಕೆ
ಓ ಪ್ರೀತಿ… ಈ ರೀತಿ… ಏಕಾದೆ..?

ನಿನ್ನ ನೆನಪಲ್ಲೇ ನಾ ಉಳಿವೆ
ನಿನ್ನ ನೆನಪಲ್ಲೇ ನಾ ಅಳಿವೆ

ಈ ಹೃದಯದಿ ನಿನ್ನ ಹೆಸರ ನಾ ಬರೆದೆ
ಮನದಲ್ಲಿ ನೀನಾಗ ಬಂದು ಕುಂತಿದ್ದೆ
ಕೈಹಿಡಿದು ಜೊತೆಯಾಗೇ ನೀಬರುವೆ
ಎಂದು ನೀನನಗೆ ಮಾತು ಕೊಟ್ಟಿದೆ

ಈಗ ಮಾತೇ ಮರೆತೋಯಿತ… ಹೆಸರೇ ಅಳಿಸಿಹೋಯಿತಾ…
ಇಲ್ಲ ನಿನ್ನ ಮನದಲ್ಲಿ ಬೇರೆ ಹೆಸರಿತ್ತಾ..?

ಕನಸನ್ನೇ ಕಾಣದ ಮನದಲ್ಲಿ
ಕನಸಾಗಿ ನಿನ್ನ ನೆನಪು ಧಾಳಿ ಮಾಡಾಯಿತು
ಮನದಲ್ಲಿ ಈ ಪ್ರೀತಿ ಚಿಗುರಿಸಿ
ಹೂವಾಗೋದ್ರೊಳಗೆ ಮೊಗ್ಗು ಬಾಡಿಹೋಯಿತು

ಈಗ ಮನಸೇ ಮರೆತೋಯಿತ… ಕನಸೇ ಕಳೆದೋಯಿತಾ
ಇಲ್ಲ ನಿನ್ನ ಕನಸಲ್ಲಿ ಬೇರೆ ಮಾನಸಿತ್ತಾ…?

A true love is never old, but the person we love needs to be true. In this Kannada sad poem, poet try to portray his love which is lost.

Liked It..! Feel Free To Share