ಎಂದೋ ಕಂಡ ಕನಸು
ನನಸಾಗಿದೆ ಇಂದು
ನಿನ್ನ ಪ್ರೀತಿಯ ಕಂಡು
ಸೋತೆನು ನಾನು ಇಂದು
ಪ್ರೀತಿಯ ಭಾಷೆಯ ಪದ ಪದ ಪದಕ್ಕೆ
ಪದ ಪದವಾಗಿ ನಾ ಬೆರೆತೆ
ನಿನ್ನ ಕಣ್ಣ ಭಾಷೆಯ ಕಲೆತು
ಮಾತನೆ ನಾನು ಮರೆತೋದೇ
ನಿನ್ನ ಪ್ರೀತಿಯ ಪಡೆದು
ಧನ್ಯನಾದೆ ಇಂದು
ನಿನ್ನ ಪ್ರೀತಿಯ ಕಂಡು
ಸೋತೆನು ನಾನು ಇಂದು
ಪ್ರೀತಿಯ ಪಯಣದಿ ಜೊತೆ ಜೊತೆಯಾಗಿ
ನಿನ್ನ ಜೊತೆಯಲ್ಲೇ ನಾ ಬರುವೆ
ನಿನ್ನ ಜೀವದ ಭಾವದ ಜೊತೆಗೆ
ನನ್ನ ಉಸಿರನು ಬೆರೆಸಿರುವೆ
ಈ ಲೋಕವೇ ಉರುಳಿದರು
ನಿನ್ನ ಕೈಯ ಬೇಡನು
ನಿನ್ನ ಪ್ರೀತಿಯ ಕಂಡು
ಸೋತೆನು ನಾನು ಇಂದು