ಪ್ರೇಮದ ಪತ್ರ ಇದು ನಿನ್ನ ಉತ್ತರಕ್ಕಾಗಿ ಕಾಯಿತಿಹುದು.
ಹೂ ಅನ್ನು ಎನ್ನುವ ದೈರ್ಯ ನನಗಿಲ್ಲ.
ಉಹು ಕೇಳಲು ನನಗೆ ಇಷ್ಟವಿಲ್ಲ.
ಪ್ರೀತಿಯ ಭಿಕ್ಷೆ ಬೇಡುತಿಹೆನು ಹೃದಯ ವೆಂಬ ಕಪಾಲ ಹಿಡಿದು..
ನೀಡು ಎಂದು ಕೇಳುವ ದೈರ್ಯ ನನಗಿಲ್ಲ.
ಮುಂದೆ ಹೋಗಲು ನನಗೆ ಇಷ್ಟವಿಲ್ಲ.
ಮರುಭೂಮಿಯಂತಿರುವ ನನ್ನ ಹೃದಯಕ್ಕೆ ನಿನ್ನ ಪ್ರೀತಿಯೇ ಪ್ರೇಮ ಸಿಂಚನ
ಹರಿಸು ಎನ್ನುವ ದೈರ್ಯ ನನಗಿಲ್ಲ
ಹರಿಸದಿದ್ದರೆ ನಾ ಉಳಿಯುವುದಿಲ್ಲ..