ನನ್ನ ಹೃದಯದ ಗೊಂಬೆ ಇಂದು ಮಾತನಾಡಿದೆ
ಆ ಮಾತನ್ನು ಕೇಳುತ ಮನಸು ಹಾಡ ಹಾಡಿದೆ
ಬರಿ ತರಲೆ ಈ ತಲೆ, ನಿನ್ನ ಹೆಸರೇ ಗುನುಗಿದೆ
ಕಲ್ಪನೆಯ ಕಣ್ಣಲ್ಲಿ, ಬರಿ ನಿನ್ನ ಕನಸೇ ಕಂಡಿದೆ
ನಿನ್ನ lookಗೆ shake ಆಗೋದೇ ನಾ
ಬ್ರಹ್ಮಾನೆ ಬೆರಗಾಗೋದ್ನ ನಿನ್ನ ಸೊಬಗನು ಕಂಡು?
ಹೂ ಒಂದು ನಿನ್ನ ಸ್ಪರ್ಶಕೆ ಕಾದು ಕುಂತಿದೇ ಇಂದು.
ಆ ಮೋಡ ನಿನ್ನ ಕೆನ್ನೆಯ ಹೋಲಿಕೆ ಏನು!
ನಿನ್ನ ಹುಬ್ಬನು ಕಂಡು rainbow ಬಗ್ಗಿದೆ ಏನು!
ನಿನ್ನಯ ನಡಿಗೆಯ ಕಂಡು ಹಂಸವೇ ನಾಚಿದೆ.
ನಿನ್ನ ಕಣ್ಣನು ಸೇರಲು ಚುಕ್ಕಿಯು ಜಾರಿದೆ.
ಅಂದಕ್ಕೆ ಅಂದವೇ ಇಲ್ಲಿ ಶರಣಾದಂತಿದೆ.
ನಿನಗಿಂದು ಶರಣಾಗೋದೇ ನಾ…
ಚಂದ್ರನಿಗೆ ನಿನ್ನ ಬಣ್ಣ ಬಾಡಿಗೆ ಕೊಟ್ಟಿದೀಯಾ?
ಕೋಗಿಲೆಗೆ ನಿನ್ನ ಕಂಠ ದಾನ ಮಾಡಿದ್ದೀಯಾ?
ನಗುವನ್ನು monalisaಗೆ ನೀನು ಕಲಿಸಿದ್ದೀಯ?
ಚಿಟ್ಟೆಗೆ ಬಣ್ಣಬಳೆದು ನೀನು ಕಳಿಸಿದ್ದೀಯಾ?
ಯಾರೇ ಏನೆ ಅಂದರು ನೀನೊಂತರ ಅಚ್ಚರಿ!
ಹಾಗೆಲ್ಲಾ ಹೇಳೋoಗಿಲ್ಲ ನಿನ್ನಯ ವೈಖರಿ.
ಈ ಹೃದಯ ನಿನಗೆಂದೇ ಆಗಿದೆ ಖಾತರಿ.
ಯಾಕೆ ಹಿಂಗೇ sale ಆಗೋದೇ ನಾ…